ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ಅವಶ್ಯ ಡಿವೈಸ್ ಆಗಿದ್ದು, ಈ ನಿಟ್ಟಿನಲ್ಲಿ ಮೊಬೈಲ್ ಕಂಪನಿಗಳು ಮಾರುಕಟ್ಟೆಗೆ ಹೊಸ ಮಾಡೆಲ್ ಸ್ಮಾರ್ಟ್‌ಫೋನ್‌ಗಳು ಪರಿಚಯಿಸುತ್ತ ಸಾಗಿವೆ. ಹಾಗೆಯೇ ಪ್ರಮುಖ ಕಂಪನಿಗಳು ಸಹ ಹೈ ಎಂಡ್ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಈ ವರ್ಷದಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಿದ್ದು, ಕೆಲವು ಫೋನ್‌ಗಳು ಟ್ರೆಂಡಿಂಗ್ ಕಾಣಿಸಿಕೊಂಡಿವೆ.
ಹೌದು, ಮಾರುಕಟ್ಟೆಗೆ ಲಾಂಚ್ ಆಗುವ ಎಲ್ಲ ಸ್ಮಾರ್ಟ್‌ಫೋನ್‌ಗಳು ಕ್ಲಿಕ್ ಆಗುವುದಿಲ್ಲ. ಕೆಲವು ಗ್ರಾಹಕರನ್ನು ಸೆಳೆಯುತ್ತವೆ ಮತ್ತೆ ಇನ್ನು ಕೆಲವು ಹೇಳ ಹೆಸರಿಲ್ಲದೇ ಮಾರುಕಟ್ಟೆಯಿಂದ ಮಾಯವಾಗುತ್ತವೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ಆಪಲ್, ಒನ್‌ಪ್ಲಸ್, ಶಿಯೋಮಿ, ಸೇರಿದಂತೆ ಬಜೆಟ್ ಬೆಲೆಯ ಫೋನ್‌ಗಳು ಟ್ರೆಂಡಿಂಗ್‌ನಲ್ಲಿವೆ. ಹಾಗಾದರೇ ಟ್ರೆಂಡಿಂಗ್‌ನಲ್ಲಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಐಫೋನ್ 12 ಪ್ರೊ ಮ್ಯಾಕ್ಸ್
ಐಫೋನ್ 12 ಪ್ರೊ ಮ್ಯಾಕ್ಸ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಐಫೋನ್ 12 ಪ್ರೊ ಮ್ಯಾಕ್ಸ್ ಟೆಲಿಫೋಟೋ ಕ್ಯಾಮೆರಾದೊಂದಿಗೆ ಉತ್ತಮವಾದ ಕ್ಯಾಮೆರಾ ಸೆಟ್ ಹೊಂದಿದ್ದು, ಇದು 65 ಎಂಎಂ ಫೋಕಲ್ ಉದ್ದವನ್ನು ಹೊಂದಿದ್ದು ಅದು ನಿಮಗೆ 2.5x ಆಪ್ಟಿಕಲ್ ಜೂಮ್ ಮತ್ತು 5x ಜೂಮ್ ಶ್ರೇಣಿಯನ್ನು ಅನುಮತಿಸುತ್ತದೆ. ಸುಧಾರಿತ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಕೂಡ ಹೊಂದಿದೆ. ಡಾಲ್ಬಿ ಸಪೋರ್ಟ್ ಸಹ ಪಡೆದಿದೆ.
Leave a Reply